ಹನಿ ನೀರಾವರಿ ಪದ್ದತಿ by ramya.t
1. ನೀರಿನಉಳಿತಾಯ : ಹನಿ ನೀರಾವರಿ ಪದ್ಧತಿಯಿಂದ ಬೆಳೆಗೆ ಪೂರೈಸುವ ನೀರಿನಲ್ಲಿ, ಬಹಳಷ್ಟು ಉಳಿತಾಯವಾಗುತ್ತದೆಂಬುದು ಪ್ರಪ್ರಥಮ ಪ್ರಯೋಜನವೆನ್ನಬಹುದು. ಸಾಂಪ್ರದಾಯಕ ನೀರಾವರಿ ಪದ್ಧತಿಗೆ ಹೋಲಿಸಿದರೆ, ಈ ಪದ್ಧತಿಯಲ್ಲಿ ಶೇಕಡ ೪೦-೮೦ ರಷ್ಟು ನೀರಿನ ಉಳಿತಾಯವಾಗುತ್ತದೆ. ನೀರಿನ ಮಿತವ್ಯಯಕ್ಕೆ ಕಾರಣಗಳು ಕೆಳಗಿನಂತಿವೆ:
ಹನಿ ನೀರಾವರಿಯನ್ನು ಅನುಸರಿಸಿದಾಗ, ಭೂ ಪ್ರದೇಶದ ಕೆಲವು ಭಾಗ ಮಾತ್ರ ನೀರಿನಿಂದ ಒದ್ದೆಯಾಗುತ್ತದೆ. ಉದಾಹರಣೆಗೆ, ಕಬ್ಬು, ಹತ್ತಿ ಮೊದಲಾದ ಬೆಳೆಗಳಲ್ಲಿ ಈ ಪದ್ಧತಿಯಿಂದ ಸುಮಾರು ಅರ್ಧದಷ್ಟು ಭೂಮಿಯು ಹಸಿಯಾಗುತ್ತದೆ.
ಹಸಿಗೊಳ್ಳುವ ಮಣ್ಣಿನ ಪ್ರದೇಶ, ಈ ಪದ್ಧತಿಯಲ್ಲಿ ಕಡಮೆ ಇರುವುದರಿಂದ ಮಣ್ಣಿನ ಮೇಲ್ಭಾಗದಿಂದ ಆವಿಯಾಗಿ ನಷ್ಟ ಹೊಂದುವ ನೀರಿನ ಪ್ರಮಾಣವೂ   ಕಡಮೆ.
ಭೂ ಪ್ರದೇಶದ ಬಹು ಭಾಗದ ಮೇಲ್ಮಣ್ಣು ಒಣಗಿಯೇ ಇರುವುದರಿಂದ ಕಳೆಗಳ ಹಾವಳಿಯು ಕಡಮೆ. ಇದರಿಂದ ಕಳೆ ನಿಯಂತ್ರಣಕ್ಕೆ ಬೇಕಾಗುವ ಖರ್ಚಿನಲ್ಲಿ ಉಳಿತಾಯವಾಗುತ್ತದಲ್ಲದೇ ಕಳೆಗಳಿಂದಾಗುವ ನೀರಿನ ನಷ್ಟವೂ ಕಡಮೆ.
i.ಪ್ರಾರಂಭಿಕಖರ್ಚು:ನೀರಾವರಿಯ ಇತರ ಪದ್ಧತಿಗಳಿಗೆ ಹೋಲಿಸಿದರೆ, ಹನಿ ನೀರಾವರಿಯನ್ನು ಆರಂಭಿಸಲು ಅಧಿಕ ಹಣವು ಬೇಕಾಗುತ್ತದೆ. ಆದರೆ, ಈ ಪದ್ಧತಿಯಿಂದ ದೊರೆಯುವ ಲಾಭ, ಅನುಕೂಲತೆಗಳು, ಸರಕಾರದಿಂದ ದೊರೆಯುವ ಅನುದಾನದ ಹಣ, ಬ್ಯಾಂಕುಗಳಿಂದ ಆಧ್ಯತೆಯ ಮೇಲೆ ಸುಲಭ ಕಂತುಗಳಲ್ಲಿ ಸಿಗುವ ಸಾಲದ ಹಣ ಇತ್ಯಾದಿಗಳನ್ನು ಪರಿಗಣಿಸಿದಾಗ ಈ ಪದ್ಧತಿಯು ಸೂಕ್ತ ಎನ್ನಬಹುದು.ii.ಕಲ್ಮಷದಿಂದಾಗುವತೊಂದರೆಗಳು:ನೀರಾವರಿಯ ಜಲದಲ್ಲಿರುವ ಕಸ ಕಡ್ಡಿ, ರೇವೆ ಇತ್ಯಾದಿ ವಸ್ತುಗಳು ಮತ್ತು ನೀರಿನಲ್ಲಿ ಬೆಳೆಯುವ ಪಾಚಿಗಳು ಕೊಳವೆಗಳಲ್ಲಿ ನೀರು ಹೊರ ಬರುವ ಸಾಧನಗಳಲ್ಲಿ ಸಂಗ್ರಹಗೊಂಡು, ಹೊರ ಬರುವ ನೀರಿಗೆ ತಡೆಯನ್ನುಂಟು ಮಾಡುತ್ತವೆ. ಹನಿ ನೀರಾವರಿ ವ್ಯವಸ್ಥೆಯ ವಿವಿಧ ಭಾಗಗಳನ್ನು ಆಗಾಗ ಸ್ವಚ್ಛಗೊಳಿಸಿ ತೊಂದರೆಯನ್ನು ನಿವಾರಿಸಬಹುದು.iii.ನೀರಿನಕೊಳವೆಗಳಿಗೆಆಗಬಹುದಾದಹಾನಿ:ನೀರನ್ನು ಹರಿಸುವ ಕೊಳವೆಗಳನ್ನು ಇಲಿ, ಹೆಗ್ಗಣಗಳು ಕಡಿದು ಹಾನಿಯನ್ನುಂಟು ಮಾಡಬಹುದು. ಬೇಸಾಯದ ಉಪಕರಣಗಳಿಂದ ಮತ್ತು ಆಳುಗಳಿಂದ ಕೊಳವೆಗಳಿಗೆ ಹಾನಿಯು ತಟ್ಟಬಹುದು. ಸಾಧ್ಯವಿದ್ದಲ್ಲಿ ಕೊಳವೆಗಳನ್ನು, ಭೂಮಿಯೊಳಗೆ ಅವಶ್ಯವಿರುವಷ್ಟು ಆಳದಲ್ಲಿ ಹೂತು ಮತ್ತು ಕೆಲವು ಮುನ್ನೆಚ್ಚರಿಕೆಗಳಿಂದ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.iv.ಅಧಿಕಆಳಕ್ಕೆಹೋಗದಬೇರುಗಳು:ಬೆಳೆಗೆ ಪೂರೈಕೆಯಾಗುವ ನೀರಿನ ಪ್ರಮಾಣವು ತುಲನಾತ್ಮಕವಾಗಿ ಕಡಿಮೆ ಇರುತ್ತದೆಯಾದ್ದರಿಂದ, ನೀರು ಹೆಚ್ಚು ಆಳಕ್ಕೆ ಇಳಿದು ಹೋಗುವುದಿಲ್ಲ. ಮತ್ತು ಹೆಚ್ಚು ಸ್ಥಳಕ್ಕೆ ಪಸರಿಸುವುದಿಲ್ಲ. ಆರ್ದ್ರತೆಯಿರುವಲ್ಲಿಯೇ ಬೇರುಗಳು ಪಸರಿಸುತ್ತವೆಯಾದ್ದರಿಂದ ಗಿಡದ ಬೇರುಗಳು ಹೆಚ್ಚು ಆಳಕ್ಕೆ ಹೋಗಿರುವುದಿಲ್ಲ.
ಹನಿ ನೀರಾವರಿ ವಿಧಾನದ ಅನುಕೂಲಗಳು
೧. ಹೆಚ್ಚಿನ ಅಂತರ ಕೊಟ್ಟು ಬೆಳೆಸುವ ಗಿಡಗಳಾದ ನಿಂಬೆ, ಕಿತ್ತಳೆ, ಚಿಕ್ಕು ಇತ್ಯಾದಿ ಬೆಳೆಗಳಿಗೆ ಈ ವಿಧಾನ ಸೂಕ್ತ.
೨. ಕುಂಡದ ಸಸ್ಯಗಳಿಗೆ ಹಾಗೂ ಹಸಿರು ಮನೆಗಳಲ್ಲಿ ಈ ವ್ಯವಸ್ಥೆ ಅನುಕೂಲಕರ.
೩. ಕಡಿಮೆ ನೀರಿನಲ್ಲಿ ಹೆಚ್ಚು ಗಿಡಗಳನ್ನು ಬೆಳೆಯಬಹುದು.
೪. ತಗ್ಗು, ದಿಣ್ಣೆ ಮತ್ತು ಇಳಿಜಾರು ಪ್ರದೇಶಗಳಲ್ಲಿ ಭೂಮಿಯನ್ನು ಸಮಪಾತಳಿಯಾಗಿ ಮಾಡದೇ ನೇರವಾಗಿ ಗಿಡಗಳನ್ನು ನೆಟ್ಟು ನೀರು ಪೂರೈಸಬಹುದು.
೫. ಕೂಲಿ ಆಳುಗಳ ಮತ್ತು ವಿದ್ಯುತ್ ಕೊರತೆ ಇರುವ ಸಂದರ್ಭಗಳಲ್ಲಿ ಹನಿ ನೀರಾವರಿ ವಿಧಾನ ಸಹಕಾರಿ.
೬. ನೀರಿನ ಹಂಚಿಕೆಯಲ್ಲಿ ಏಕರೂಪತೆ ಸಾಧಿಸಲು ಹನಿ ನೀರಾವರಿ ವಿಧಾನದಲ್ಲಿ ಸಾಧ್ಯ.
ನೀರಿನ ಕೊರತೆ ಇರುವ ಸ್ಥಳದಲ್ಲಿ ಹನಿ ನೀರಾವರಿ ವಿಧಾನ ಅನುಸರಿಸುವುದು ಸೂಕ್ತ. ಸಂಪೂರ್ಣ ನೀರಿನ ಮಿತವ್ಯಯ ಈ ವಿಧಾನದಲ್ಲಿ ಸಾಧ್ಯವಾಗುವುದು. ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಸಿಕೊಂಡು ಹೆಚ್ಚು ಗಿಡಗಳನ್ನು ಬೆಳೆಯಬಹುದಾಗಿದೆ. ಹೆಸರೇ ಸೂಚಿಸುವಂತೆ ಗಿಡಗಳಿಗೆ ನೀರು ಹನಿಹನಿಯಾಗಿ ಪೂರೈಸಲ್ಪಡುವುದು. ನೇರವಾಗಿ ಗಿಡಗಳಿಗೆ ನೀರು ಪೂರೈಕೆಯಾಗುವುದರಿಂದ ವ್ಯರ್ಥವಾಗುವುದಿಲ್ಲ. ನೀರು ಸಂಗ್ರಹದಿಂದ ಕೊಳವೆಗಳ ಮೂಲಕ ಗಿಡಗಳಿಗೆ ನೀರಿನ ಸಂಪರ್ಕವಿರುವುದು. ಇಲ್ಲಿ ಹನಿ ಸಲಕರಣೆಯ ಮೂಲಕ ಹಣಿ ಹನಿಯಾಗಿ ಅಥವಾ ಸಣ್ಣ ಝರಿಗಳ ರೂಪದಲ್ಲಿ ನೀರು ಪೂರೈಸಲಾಗುವುದು. ಹನಿ ನೀರಾವರಿ ವ್ಯವಸ್ಥೆ ಅಳವಡಿಸುವುದು ಪ್ರಾರಂಭದಲ್ಲಿ ಖರ್ಚುದಾಯಕ ಎನಿಸುವುದು. ಆದರೆ ನಂತರ ಈ ವ್ಯವಸ್ಥೆ ಲಾಭದಾಯಕವಾಗಿದೆ.