ಮಕ್ಕಳ ಹಕ್ಕುಗಳು by ramya.t
1. ಮಕ್ಕಳ ಅತ್ಯಂತ ಪ್ರಮುಖ ಅವಶ್ಯಕತೆಗಳೇ ಮಕ್ಕಳ  ಹಕ್ಕುಗಳು. ಅವುಗಳಿಗೆ ಮನ್ನಣೆ ಕೋಡುವುದು ಅಧವಾ ಜಾರಿ ಮಾಡುವುದು ಎಲ್ಲ ವಯಸ್ಕರ ಜವಾಬ್ದಾರಿ.
2. ಮಕ್ಕಳ ಹಕ್ಕುಗಳನ್ನು ಯಾರೂ ಯಾವುದೇ ಸಂದರ್ಭದಲ್ಲೂ  ಉಲ್ಲಂಘಿಸಬಾರದು, ನಿರಾಕರಿಸಬಾರದು, ಮಕ್ಕಳಿಗೆಂದು ನಿಗದಿಯಾಗಿರುವ ಈ ನಡೆಸಿಕೋಡಲೇಬೇಕು.
3. ಮಕ್ಕಳ ಹಕ್ಕುಗಳ ಸಾರ ಸಂಗ್ರಹವನ್ನು ಈ ಮುಂದೆ ನೀಡಲಾಗಿದೆ. ಮಕ್ಕಳ   ಹಕ್ಕುಗಳನ್ನು ಯಾರೇ ಉಲ್ಲಂಘಿಸಿದರೂ ಮಕ್ಕಳು ಅಥವಾ ವಯಸ್ಕರು ''ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ  ರಕ್ಷಣಾ ಆಯೋಗ ''ಕ್ಕೆ ದೂರು ನೀಡಬೇಕು.
1. ನಿಮಗೆ 18 ವರ್ಷ ತುಂಬುವವರೆಗೆ ನೀವು  ಮಕ್ಕಳೇ,ಈ ಮುಂದಿನ  ಎಲ್ಲ ಹಕ್ಕುಗಳು ನಿಮಗಿದೆ.
2. ನಿಮ್ಮನ್ನು ಯಾವುದೇ ಕಾರಣಕ್ಕೂ ಯಾರೂ ಎಲ್ಲಿ ಯೂ ಭೇಧಭಾವ ಮಾಡಬಾರದು
3. ಯಾವುದೇ ವಿಚಾರಕ್ಕೆ ಯಾರೇ ಆಗಲೀ ನಿರ್ಧರಿಸುವಾಗ ಅದರಿಂದ ಮಕ್ಕಳಿಗೆ ಒಳ್ಳೆಯದು ಆಗುವುದೋ ಇಲ್ಲವೋ ಪರಿಶೀಲಿಸಲೇಬೇಕು.
4. ನಿಮ್ಮ ಹಕ್ಕುಗಳನ್ನು ಜಾರಿ ಮಾಡಲು ಸರ್ಕಾರಗಳು ಸೂಕ್ತವಾದ ನಿರ್ಧಾರ, ಯೋಜನೆ. ಕಾರ್ಯಕ್ರಮಗಳನ್ನು ನಡೆಸಬೇಕು.
5. ನಿಮ್ಮ ಬೆಳವಣಿಗೆ, ರಕ್ಷಣೆ,ಪೋಷಣೆ ಮಾಡಲು ತಾಯಿ,ತಂದೆ,ಪೋಷಕರು ಮಾರ್ಗದರ್ಶನ ಮಾಡುವ ಜವಾಬ್ದಾರಿ ತೆಗೆದುಕೋಳ್ಳಲೇಬೇಕು.
6. ಎಲ್ಲ ಮಕ್ಕಳಿಗೂ ಸಾಯದೇ ಬದುಕುಳಿಯುವ ಮತ್ತು ಆರೋಗ್ಯದಿಂದ ಜೀವಿಸುವ ಹಕ್ಕು ಇದೆ.
7. ಮಕ್ಕಳೂ ಪ್ರಜೆಗಳೇ, ಹುಟ್ಟಿದ ಪ್ರತಿ ಮಗುವಿಗೆ ಹೆಸರು,ದೇಶ,ಕುಟುಂಬ ಹೋಂದುವ ಹಕ್ಕು ಇದೆ.
8. ನಿಮ್ಮ ಹೆಸರು,ಗುರುತು,ಗೌರವದ ಹಕ್ಕಿಗೆ ಯಾರೂ ತೋಂದರೆ,ಅವಮಾನ ಮಾಡಬಾರದು.
9. ತಾಯಿ,ತಂದೆ,ಪೋಷಕರಿಂದ ಯಾರೂ ಮಕ್ಕಳನ್ನು ಯಾವುದೇ ಕಾರಣಕ್ಕೂ ಬೇರೆ ಮಾಡಬಾರದು.
10. ಮಕ್ಕಳು ಮತ್ತು ಪೋಷಕರನ್ನು ಬಲವಂತವಾಗಿ     ದೂರ ಮಾಡಲೇಬಾರದು.ಅವರು ಜೋತೆಗಿರಲು ಸರ್ಕಾರ ಅವಕಾಶ ಮಾಡಿಕೋಡಬೇಕು.
11. ಮಕ್ಕಳನ್ನು ಕದಿಯುವುದು, ಬಚ್ಚಿಡುವುದು, ಮಾರುವುದು, ಸಾಗಿಸುವುದು ಶಿಕ್ಷಾರ್ಹ ಅಪರಾಧ.
12 . ನಿಮಗೆ ಸಣಬಂಧಿಸಿದಂತೆ ನಿರ್ಧಾರ ಆಗುವಾಗ ಅಭಿಪ್ರಾಯ ಕೋಡುವುದು ನಿಮ್ಮ ಹಕ್ಕು. ಅದನ್ನು ವಯಸ್ಕರು ತಿಳಿದಿರಬೇಕು.
13. ನಿಮ್ಮ ಅಬಿಪ್ರಾಯ ತಿಳಿಸುವ ಹಕ್ಕಿಗೆ ನೆರವಾಗಲು ದೇಶ,ಬಾಷೆ,ಗಡಿಗಳ ಅಂತರವಿಲ್ಲದೆ ಮಾಹಿತಿ ಪಡೆಯುವ,ವಿಚಾರ ತಿಲಿಯುವ ಹಕ್ಕು ನಿಮಗಿದೆ.
14. ತಾಯಿ-ತಂದೆಯ ಮಾರ್ಗದರ್ಶನದಲ್ಲಿ ವಿಚಾರ ಮಾಡುವ,ನಿಮ್ಮ ಇಷ್ಟದಂತೆ ಆಲೋಚಿಸುವ,ಧಾರ್ಮಿಕ ವಿಧಿಗಳನ್ನು ಆದರಿದುವ ಹಕ್ಕು ನಿಮಗಿದೆ.
15 ಎಲ್ಲ ಮಕ್ಕಳೋಡನೆ ಬೆರೆಯುವ,ಸಂಘ ಮಾಡುವ,ಚರ್ಚಿಸಿ, ಚಿಂತಿಸಿ ನಿರ್ಧರಿಸುವ ಹಕ್ಕು ನಿಮಗಿದೆ.
16. ನಿಮ್ಮ ಸುತ್ತಮುತ್ತಲಿನ ಮತ್ತು ಜಗತ್ತಿನ ಮಾಹಿತಿಗಳು ನಿಮಗೆ ಸಿಗಲು ಪುಸ್ತಕ, ಪತ್ರಿಕೆ,ರೇಡಿಯೋ, ದೂರದರ್ಶನ, ಅಂತರ್ಜಾಲ, ಸಿನೆಮಾಗಳು ನಿಮಗೆ ಲಭ್ಯವಿರಲೇಬೇಕು.
17. ತಾಯಿ-ತಂದೆಯರೋಡನೆ ಇದ್ದು ಬೆಳೆಯುವ ಹಕ್ಕು ಎಲ್ಲ ಮಕ್ಕಳಿಗಿದೆ. ಇದು ಪೋಷಕರ ಜವಾಬ್ದಾರಿ. ಸರ್ಕಾರ ಇದಕ್ಕೆ ಬೆಂಬಲ ನೀಡಲೇಬೇಕು.
18. ಮಕ್ಕಳಿಗೆ ಹೋಡೆದು,ಬೈದು,ನಿರ್ಲಕ್ಷ್ಯ ಮಾಡಿ,ಕಿರುಕುಳ ಕೋಡುವುದು,ದುಡಿಸಿ ತೋಂದರೆ,ಹಿಂಸೆ ಕೋಡುವುದು ಅಪರಾಧ. ಇವೆಲ್ಲವೂ ಶಿಕ್ಷಾರ್ಹ.
19. ಮಕ್ಕಳನ್ನು ದತ್ತು ನೀಡಬೇಕಾದಾಗ ಅದು ಮಗುವಿನ ಹಿತದೃಷ್ಟಿಯಿಂದಲೇ ಆಗಬೇಕು.
20. ಕುಟುಂಬ ಅಧವಾ ಆಶ್ರಯ ಇಲ್ಲದ ಮಕ್ಕಳಿಗೆ ರಕ್ಷಣೆ ನೀಡುವುದು ಸಮಾಜ ಮತ್ತು ಸರ್ಕಾರದ ಕರ್ತವ್ಯ.
21. ದೈಹಿಕ, ಮಾನಸಿಕ ತೋಂದರೆ ಇದ್ದರೂ,ಗೌರವಯುತವಾಗಿ ಶಿಕ್ಷಣ,ಮನೋರಂಜನೆ,ಆಟೋಟಗಳಲ್ಲಿ ಭಾಗವಹಿಸುವ, ಪೂರ್ಣವಾದ ಜೀವನ ನಡೆಸುವ ಹಕ್ಕು ಮಕ್ಕಳಿಗೆ ಇದೆ.
22. ಆರೋಗ್ಯ ಸೇವಾ ಸೌಲಭ್ಯಗಳು ಮಕ್ಕಳಿಗೆ ಸಿಗಲೇಬೇಕು. ವೈದ್ಯಕೀಯ ನೆರವು,ಮಾಹಿತಿ ನೀಡಿ ಮಕ್ಕಳು ಸಾಯದಂತೆ,ಅಂಗವಿಕಲರಾಗದಂತೆ ತಡೆಯಬೇಕು.
23. ಶಿಕ್ಷಣ,ರಕ್ಷಣೆ,ಚಿಕಿತ್ಸೆಗಾಗಿ ಮಕ್ಕಳು ಕುಟುಂಬದಿಂದ ದೂರ ಇದ್ದಲ್ಲಿ ಅಲ್ಲಿನ ವ್ಯವಸ್ಥೆ,ಪ್ರಗತಿ, ರಕ್ಷಣೆ ಕುರಿತು ಸರ್ಕಾರವು ಕಾಲಕಾಲಕ್ಕೆ ಪರಿಶೀಲನೆ ಮಾಡಬೇಕು.
24. ಬಡವರು,ನಿರ್ಗತಿಕ ಕುಟುಂಬಗಳ ಮಕ್ಕಳ ಪ್ರಗತಿಗಾಗಿ ಸರ್ಕಾರಗಳು ಸಾಮಾಜಿಕ ಭದ್ರತೆ, ವಿಮೆ, ಇತ್ಯಾದಿ ಸೇವೆಗಳನ್ನು ಒದಗಿಸಲೇಬೇಕು.
25.ಮಕ್ಕಳ ದೈಹಿಕ, ಮಾನಸಿಕ, ಧಾರ್ಮೀಕ, ನೈತಿಕ, ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗುವ ಜೀವನ ಮಟ್ಟವನ್ನು ತಕ್ಕಮಟ್ಟಿಗೆ ಒದಗಿಸುವುದು  ಪೋಷಕರ ಕರ್ತವ್ಯ.
26. ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕು ಇದೆ.ಇದನ್ನು ತಡೆಹಿಡಿಯುವವರನ್ನು ಸರ್ಕಾರವು ಶಿಕ್ಷಿಸಬೇಕು.
27. ವ್ಯಕ್ತಿತ್ವ,ಪ್ರತಿಭೆ,ಮಾನಸಿಕ,ದೈಹಿಕ ಸಾಮರ್ಥ್ಯಗಳು ವಿಕಾಸವಾಗುವಂತಹ ಶಿಕ್ಷಣ ಮಕ್ಕಳಿಗೆ ಸಿಗಲೇಬೇಕು.ಬೇರೆಯವರ ಭಾವನೆ, ಹಕ್ಕುಗಳನ್ನು ಗೌರವಿಸುವ ಮನೋಭಾವವನ್ನು ಶಿಕ್ಷಣವು ಮಕ್ಕಳಲ್ಲಿ ಬೆಳೆಸಬೇಕು.
28.ಪ್ರತಿಯೋಒ್ಬರಿಗೂ(ಮೂಲನಿವಾಸಿಗಳು,ಅಲ್ಪಸಂಖ್ಯಾತರನ್ನೂಒಳಗೋಂಡಂತೆ)ತಮ್ಮಮಾತೃಭಾಷೆ,ಸಂಸ್ಕೃತಿ,ಧರ್ಮವನ್ನು ಅನುಸರಿಸುವ ಹಕ್ಕಿದೆ
29. ವಿರಾಮ, ವಿಶ್ರಾಂತಿ ಹೋಂದುವ, ಆಟ, ಮನೋರಂಜನೆ, ಸೃಜನಶೀಲ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಮಕ್ಕಳ ಹಕ್ಕು.
31. ಮಕ್ಕಳಿಗೂ ಖಾಸಗೀತನದ ಹಕ್ಕಿದೆ.
32. ತಾಯಿ- ತಂದೆ ಪೋಷಕರಿಲ್ಲದ ಮಕ್ಕಳಿಗೆ ವಿಶೇಷ ರಕ್ಷಣೆ ನೀಡಬೇಕು.ಅಂಥಹ ಮಕ್ಕಳಿಗೆ ದತ್ತು ಮೂಲಕ ಪರ್ಯಾಯ ಕುಟುಂಬ ವ್ಯವಸ್ಥೆ ಮಾಡಲೇಬೇಕು.
33. ಮಕ್ಕಳಿಂದ ಮಾದಕ ವಸ್ತುಗಳನ್ನು (ಬೀಡಿ, ಸಿಗರೇಟ್, ಗುಟ್ಕಾ, ಹೆಂಡ, ಇತ್ಯಾದಿ) ಮಾಡಿಸುವುದು, ಮಾರಿಸುವುದು, ಸಾಗಿಸುವುದು, ತರಿಸುವುದು ಅಥವಾ ಮಕ್ಕಳಿಗೂ ಸೇವಿಸಲು ಕೊಡುವುದು ಅಪರಾಧ.
34. ಮಕ್ಕಳ ಮೇಲೆ ಲೈಂಗಿಕ ಶೋಷಣೆ ಮಾಡುವುದು, ದೇವದಾಸಿಯರನ್ನಾಗಿಸುವುದು, ಬಾಲ್ಯದಲೇ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧ.
35. ಮಕ್ಕಳನ್ನು ಅಪಹರಿಸುವುದು, ಸಾಗಿಸುವುದು, ಬಚ್ಚಿಡುವುದು, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ.
36. ಮಕ್ಕಳ ಶ್ರೇಯೋಭೀವೃದ್ಧಿ, ಒಳಿತಿಗೆ ತೊಂದರೆ  ಕೊಡುವಂತಹ ಯಾವುದೇ ಕೃತ್ಯವನ್ನು ಯಾರೂ ಮಾಡದಂತೆ ಸರ್ಕಾರ ತಡೆಯಬೇಕು.
37. ಮಕ್ಕಳು ಸಶಸ್ತ್ರ ಸಂಘರ್ಷ, ಹಿಂಸೆ, ತಿರಸ್ಕಾರ, ದುರುಪಯೋಗ, ಶೋಷಣೆಗೆ ಗುರಿಯಾಗಿದ್ದಲ್ಲಿ, ಅವರಿಗೆ ಚಿಕಿತ್ಸೆ, ಆರೈಕೆ, ಸಾಮಾಜಿಕ ಪುರ್ನವಸತಿಯನ್ನು ಶೀಘ್ರವಾಗಿ ಮಾಡಬೇಕು.
38. ಮಕ್ಕಳು ಕಾನೂನು ಮೀರಿದ್ದಲ್ಲಿ ಅವರ ವ್ಯಕ್ತಿತ್ವ, ಗೌರವಗಳಿಗೆ ಧಕ್ಕೆಯಾಗದಂತೆ ಮನಃಪರಿವರ್ತನೆಗೆ ಅವಕಾಶ ಮಾಡಿಕೊಡಬೇಕು.
40. ಎಲ್ಲ ಮಕ್ಕಳಿಗೆ ಎಲ್ಲ ಹಕ್ಕುಗಳು ಸಿಗಲೇಬೇಕು. ಇದಕ್ಕೆ ಯಾವುದೇ ಕಾಯಿದೆ, ಕಾನೂನು, ನಿಯಮಗಳು ಅಡ್ಡಿಯಾಗಬಾರದು.
ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಜಾರಿಮಾಡಿ ಮಕ್ಕಳಿಗೆ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಮಾಡಲು, ಯಾವುದೇ ಮಗು ಶೋಷಣೆ, ಹಿಂಸೆ, ದಬ್ಬಾಳಿಕೆ, ತಾರತಮ್ಯ, ತೊಂದರೆಗಳಿಗೆ ಈಡಾಗದಂತೆ ನೋಡಿಕೊಳ್ಳಲು ಭಾರತ ಸರ್ಕಾರ ಒಪ್ಪಿದೆ. ಇದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ದೇಶದ ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಆದರೂ, ನಮ್ಮ ದೇಶದಲ್ಲಿ ಮಕ್ಕಳು ಹಲವಾರು ತೊಂದರೆಗಳಿಗೆ ಈಡಾಗುತ್ತಿದ್ದಾರೆ: ಪೌಷ್ಠಿಕ ಆಹಾರ ದೊರೆಯದೆ ಸೊರಗುವ ಮಕ್ಕಳು, ಆರೋಗ್ಯ ನೆರವು ಸಿಗದೆ ನರಳುವ ಮಕ್ಕಳು, ರೋಗಗಳಿಗೆ ಸಿಲುಕಿ ಮರಣ ಹೊಂದುವ ಮಕ್ಕಳು,ಶಾಲಾ ಶಿಕ್ಷಣದಿಂದ ಹೊರಗಿರುವ; ದುಡಿಯುವ; ಜೀತದಲ್ಲಿರುವ ಮಕ್ಕಳು. ಕಪ್ಪೆಂದೋ,ಅಂಗವಿಕಲತೆಯಿರುವವರೆಂದೋ, ಹೆಣ್ಣೆಂದೋ, ಬೇರೆ ಜಾತಿ, ಧರ್ಮದವರೆಂದೋ, ಕಲಿಕೆಯಲ್ಲಿ ಹಿಂದುಳಿದವರೆಂದೋ ಅಥವಾ ಇನ್ನಾವುದೋ ಕಾರಣಕ್ಕೆ ದೊಷಣೆಗೆ, ತಾರತಮ್ಮಕ್ಕೆ ಈಡಾಗುತ್ತಿರುವ ಮಕ್ಕಳ: ಮನೆ, ಶಾಲೆ, ಮಕ್ಕಳ ನಿಲಯ, ಸಾರ್ವನಿಕ ಸ್ಥಳಗಳಲ್ಲಿ ದೈಹಿಕ ಹೊಡೆತ ಬೈಗುಳಕ್ಕೆ ಒಳಗಾಗುವ ಮಕ್ಕಳು ಇತ್ಯಾದಿ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕರ್ತವ್ಯಗಳು
1. ಮಕ್ಕಳ ರಕ್ಷಣೆಗಾಗಿ ಇರುವ ಕಾಯಿದೆ, ಕಾರ್ಯಕ್ರಮಗಳನ್ನು ಪರಿಶೀಲಿಸಿ, ಸಮರ್ಪಕ ಜಾರಿಗಾಗಿ ಶಿಫಾರಸ್ಸು ಮಾಡುವುದು.
2. ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೋಳ್ಳಲು ಶಿಫಾರಸ್ಸು ನೀಡುವುದು.
3. ಮಕ್ಕಳ ಜೋತೆ ಯಾರೇ ಆಗಲಿ ಕೆಟ್ಟದಾಗಿ ನಡೆದುಕೋಳ್ಳುತ್ತಿದ್ದರೆ, ಯಾವುದೇ ಸಂದರ್ಭದಲ್ಲಿ ಮಕ್ಕಳಿಗೆ ತೋಂದರೆಯಾಗುತ್ತಿದೆ ಎಂದು ಕಂಡು ಬಂದರೆ, ಮಕ್ಕಳಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಅಡ್ಡಿ ಆತಂಕಗಳಿವೆ ಎಂದು ದೂರು/ತಿಳಿದು ಬಂದರೆ, ಅವುಗಳನ್ನು ಕುರಿತು ವಿಚಾರಣೆ ಮಾಡಿ ಸೂಕ್ತ ಪರಿಹಾರ ಕ್ರಮಗಳನ್ನು ಸರ್ಕಾರಕ್ಕೆ ಸೂಚಿಸುವುದು.
4. ಅವಕಾಶ ವಂಚಿತ ಮಕ್ಕಳು,ವಿಶೇಷವಾದ ಕಾಳಜಿಯ ಅವಶ್ಯಕತೆ ಇರುವ ಮಕ್ಕಳು,ತಪ್ಪು ಮಾಡಿರುವ ಮಕ್ಕಳು,ಕುಟುಂಬವಿಲ್ಲದ ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಪುನರ್ವಸತಿಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.
5. ಮಕ್ಕಳನ್ನು ಕುರಿತು ಸರ್ಕಾರ ಮಾಡಿಕೊಂಡಿರುವ ಒಪ್ಪಂದಗಳು,ಕಾನೂನುಗಳು,ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಸೂಚಿಸುವುದು ಮತ್ತು ಅವುಗಳಲ್ಲಿರಬಹುದಾದ ತೊಡಕುಗಳನ್ನು ನಿವಾರಿಸಲು ನಿರ್ದೇಶಿಸುವುದು.
6. ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸಂಶೋದನೆಗಳನ್ನು ಕೈಗೊಂಡು ಅವುಗಳ ಫಲಶೃತಿಯನ್ನು ಅಳವಡಿಸುವುದು.
7. ಮಕ್ಕಳ ಹಕ್ಕುಗಳನ್ನು ಕುರಿತು ಮಕ್ಕಳು,ವಯಸ್ಕರು,ಸರ್ಕಾರದ ವಿವಿಧ ಇಲಾಖೆಗಳು,ಖಾಸಗಿ ರಂಗ,ಮಾಧ್ಯಮಗಳು ಇತರರಿಗೆ ತಿಳಿಸಿ ಮಕ್ಕಳ ಹಕ್ಕಗಳನ್ನು ಯಾರೂ ಉಲ್ಲಂಘಿಸದಂತೆ ಅರಿವು ಮೂಡಿಸುವುದು.
8. ಸರ್ಕಾರದ ಆಥವಾ ಖಾಸಗಿಯವರು ನಡೆಸುವ ಏಲ್ಲ ರೀತಿಯ ಮಕ್ಕಳ ನಿಲಯಗಳನ್ನು ಪರಿಶೀಲಿಸಿ ಅಲ್ಲಿರಬಹುದಾದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ನಿರ್ದೇಶಿಸುವುದು.
ಈ ಹೊಸ ಕಾಯಿದೆಯಂತೆ 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳು ಪೂರ್ಣಾವಧಿಯ ಶಾಲಾ ಶಿಕ್ಷಣದಲ್ಲಿ ತೊಡಗಿರಲೇಬೇಕು. ಯಾವುದಾದರೂ ಮಗು ಅಥವಾ ಮಕ್ಕಳ ಸಮೂಹಕ್ಕೆ ಈ ಕಾಯಿದೆಯಲ್ಲಿ ಸೂಚಿಸಿರುವಂತೆ ಶಿಕ್ಷಣ ಪಡೆಯಲು ತೊಂದರೆಯಾಗುತ್ತದೆ ಎಂದರೆ ಅದನ್ನು ಪರಿಶೀಲಿಸುವ ಜವಾಬ್ದಾರಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕಿದೆ.ಇಂತಹ ಪ್ರಕರಣಗಳನ್ನು ತನಿಖೆ ಮಾಡಿ ಮಕ್ಕಳಗೆ ಶಿಕ್ಷಣದ ವ್ಯವಸ್ಥೆಯನ್ನು ಮಾಡಲು,ಮಕ್ಕಳಿಗೆ ಶಾಲೆಯಲ್ಲಿ ಯಾವುದೇ ಸಮಸ್ಯೆಗಳುಂಟಾಗದಂತೆ ರಕ್ಷಿಸಲು ಮಕ್ಕಳ ಹಕ್ಕಗಳ ರಕ್ಷಣಾ ಆಯೋಗ ಶಿಫಾರಸ್ಸುಗಳನ್ನು ಮಾಡುವ ಅಧಿಕಾರ ಹೊಂದಿದೆ.